Shri Siddhantha Shikhamani.com

Veerashaiva Dharma Grantha

ದಶಮಃ ಪರಿಚ್ಛೇದಃ - Chapter 10

ದಶಮಃ ಪರಿಚ್ಛೇದಃ
ಹತ್ತನೆಯ ಪರಿಚ್ಛೇದವು

ಮಾಹೇಶ್ವರಸ್ಯ ನವವಿಧಸ್ಥಲಪ್ರಸಂಗಃ
ಮಾಹೇಶ್ವರನ ನವವಿಧಸ್ಥಲ ಪ್ರಸಂಗವು
(79 ಶ್ಲೋಕಗಳು)

ಮಾಹೇಶ್ವರಸ್ಥಲಮ್
ಮಾಹೇಶ್ವರಸ್ಥಲವು
(7 ಶ್ಲೋಕಗಳು)

|| ಅಗಸ್ತ್ಯ ಉವಾಚ ||
ಭಕ್ತಸ್ಥಲಂ ಸಮಾಖ್ಯಾತಮ್
ಭವತಾ ಗಣನಾಯಕ |
ಕೇನ ವಾ ಧರ್ಮಭೇದೇನ
ಭಕ್ತೋ ಮಾಹೇಶ್ವರೋ ಭವೇತ್ ||    10-1

ಗಣನಾಯಕನಾದ ರೇಣುಕನೇ, ತಮ್ಮಿಂದ ಭಕ್ತಸ್ಥಲವು ಚೆನ್ನಾಗಿ ಹೇಳಲ್ಪಟ್ಟಿತು. ಆ ಭಕ್ತನು ಯಾವ ಧರ್ಮಭೇದದಿಂದ (ಆಚಾರ ವಿಶೇಷದಿಂದ) ಮಾಹೇಶ್ವರನಾಗುವನು?

|| ಶ್ರೀ ರೇಣುಕ ಉವಾಚ ||
ಕೇವಲೇ ಸಹಜೇ ದಾನೇ
ನಿಷ್ಣಾತಃ ಶಿವತತ್ಪರಃ |
ಬ್ರಹ್ಮಾದಿಸ್ಥಾನವಿಮುಖೋ
ಭಕ್ತೋ ಮಾಹೇಶ್ವರಃ ಸ್ಮೃತಃ ||     10-2
ಕೇವಲ ಸಹಜದಾನದಲ್ಲಿಯೇ ಕುಶಲನಾದ, ಶಿವನಲ್ಲಿಯೇ ಏಕನಿಷ್ಠೆಯುಳ್ಳವನಾದ ಮತ್ತು ಬ್ರಹ್ಮಾದಿ ಪದವಿಗಳಿಂದ ವಿಮುಖನಾದ (ನಿಸ್ಪೃಹನಾದ) ಭಕ್ತನೇ ಮಾಹೇಶ್ವರನೆಂದು ಕರೆಸಿಕೊಳ್ಳುತ್ತಾನೆ.

ಭಕ್ತೇರ್ಯದಾ ಸಮುತ್ಕಷರ್ೊ
ಭವೇದ್ ವೈರಾಗ್ಯಗೌರವಾತ್ |
ತದಾ ಮಾಹೇಶ್ವರಃ ಪ್ರೋಕ್ತೋ

Read more...