Shri Siddhantha Shikhamani.com

Veerashaiva Dharma Grantha

ಏಕಾದಶಃ ಪರಿಚ್ಛೇದಃ - Chapter 11

 

 

 

ಏಕಾದಶಃ ಪರಿಚ್ಛೇದಃ
ಹನ್ನೊಂದನೆಯ ಪರಿಚ್ಛೇದವು

ಪ್ರಸಾದಿನಃ ಸಪ್ತವಿಧಸ್ಥಲಪ್ರಸಂಗಃ
ಪ್ರಸಾದಿಯ ಸಪ್ತವಿಧ ಸ್ಥಲ ಪ್ರಸಂಗವು
(77 ಶ್ಲೋಕಗಳು)

ಪ್ರಸಾದಿಸ್ಥಲಮ್
ಪ್ರಸಾದಿಸ್ಥಲವು
(5 ಶ್ಲೋಕಗಳು)

|| ಅಗಸ್ತ್ಯ ಉವಾಚ ||
ಉಕ್ತೋ ಮಾಹೇಶ್ವರಃ ಸಾಕ್ಷಾತ್
ಲಿಂಗನಿಷ್ಠಾದಿಧರ್ಮವಾನ್ |
ಕಥಮೇಷ ಪ್ರಸಾದೀತಿ
ಕಥ್ಯತೇ ಗಣನಾಯಕ ||     11-1

ಹೇ ಗಣನಾಯಕನಾದ ರೇಣುಕನೇ, ಲಿಂಗನಿಷ್ಠಾದಿ ಧರ್ಮಗಳುಳ್ಳ ಸಾಕ್ಷಾತ್ ಮಾಹೇಶ್ವರನ ಸ್ವರೂಪವನ್ನು ನೀನು ಹೇಳಿದೆ. ಈ ಮಾಹೇಶ್ವರನು ಹೇಗೆ ತಾನೇ ಪ್ರಸಾದಿಯಾಗುತ್ತಾನೆ?

|| ಶ್ರೀ ರೇಣುಕ ಉವಾಚ ||
ಲಿಂಗನಿಷ್ಠಾದಿಭಾವೇನ
ಧ್ವಸ್ತಪಾಪನಿಬಂಧನಃ |
ಮನಃ ಪ್ರಸಾದಯೋಗೇನ
ಪ್ರಸಾದೀತ್ಯೇಷ ಕಥ್ಯತೇ ||     11-2
ಲಿಂಗನಿಷ್ಠಾದಿ ಸ್ಥಲಗಳನ್ನು ಭಾವಿಸುವುದರಿಂದ (ತಿಳಿದು ಆಚರಿಸುವುದರಿಂದ) ಪಾಪಬಂಧನವನ್ನು ಧ್ವಂಸಮಾಡಿಕೊಂಡ, ಅಂತೆಯೇ ಮನಸ್ಸನ್ನು ಪ್ರಸನ್ನವಾಗಿಟ್ಟುಕೊಂಡ ಈ ಮಾಹೇಶ್ವರನು ಪ್ರಸಾದಿಯೆಂದು ಹೇಳಲ್ಪಡುತ್ತಾನೆ.

ಪ್ರಸಾದಿಸ್ಥಲಮಿತ್ಯೇತತ್
ಅಸ್ಯ

Read more...