Shri Siddhantha Shikhamani.com

Veerashaiva Dharma Grantha

ತ್ರಯೋದಶಃ ಪರಿಚ್ಛೇದಃ - Chapter 13

 

 

 

ತ್ರಯೋದಶಃ ಪರಿಚ್ಛೇದಃ
ಹದಿಮೂರನೆಯ ಪರಿಚ್ಛೇದವು

ಶರಣಸ್ಯ ಚತುವರ್ಿಧಸ್ಥಲಪ್ರಸಂಗಃ
ಶರಣನ ಚತುವರ್ಿಧಸ್ಥಲ ಪ್ರಸಂಗವು
(37 ಶ್ಲೋಕಗಳು)

ಶರಣಸ್ಥಲಮ್
ಶರಣಸ್ಥಲವು
(4 ಶ್ಲೋಕಗಳು)

|| ಅಗಸ್ತ್ಯ ಉವಾಚ ||
ಮಾಹೇಶ್ವರಃ ಪ್ರಸಾದೀತಿ
ಪ್ರಾಣಲಿಂಗೀತಿ ಬೋಧಿತಃ |
ಕಥಮೇಷ ಸಮಾದಿಷ್ಟಃ
ಪುನಃ ಶರಣಸಂಜ್ಞಕಃ ||     13-1

(ಹೇ ಗಣಾಧೀಶ್ವರನೇ) ಮಾಹೇಶ್ವರನೆಂದೂ, ಪ್ರಸಾದಿಯೆಂದೂ ಬೋಧಿಸಲ್ಪಟ್ಟ ಈ ಪ್ರಾಣಲಿಂಗಿಯೇ ಮತ್ತೆ ಯಾವ ಕಾರಣದಿಂದ ಶರಣನೆಂಬ ಹೆಸರುಳ್ಳವನಾಗಿ ಹೇಳಲ್ಪಡುವನು.

|| ಶ್ರೀ ರೇಣುಕ ಉವಾಚ ||
ಅಂಗಲಿಂಗೀ ಜ್ಞಾನರೂಪಃ
ಸತೀ ಜ್ಞೇಯಃ ಶಿವಃ ಪತಿಃ |
ಯತ್ಸೌಖ್ಯಂ ತತ್ಸಮಾವೇಶೇ
ತದ್ವಾನ್ ಶರಣನಾಮವಾನ್ ||    13-2
ಜ್ಞಾನರೂಪನಾದ (ಶಿವಜ್ಞಾನರೂಪಿಯಾದ) ಅಂಗಲಿಂಗಿಯಾದ ಪ್ರಾಣಲಿಂಗಿಯೇ ಸತಿಯೆಂದು, ಶಿವನು ಪತಿಯೆಂದು ತಿಳಿದುಕೊಂಡು ಇವರಿಬ್ಬರ ಸಮಾವೇಶದಲ್ಲಿ (ಸಮಾನ ಸಮರಸ ರೂಪವಾದ ಸಾಮರಸ್ಯದಲ್ಲಿ) ಯಾವ ಸೌಖ್ಯವುಂಟಾಗುವುದೋ, ಅದನ್ನು ಪಡೆದವನೇ ಶರಣನೆಂದು ಹೆಸರುಳ್ಳವನಾಗುವನು (ಶರಣನಾಗುವನು).

Read more...