Shri Siddhantha Shikhamani.com

Veerashaiva Dharma Grantha

ಪಂಚದಶಃ ಪರಿಚ್ಛೇದಃ Chapter 15

 

 

 

 

ಪಂಚದಶಃ ಪರಿಚ್ಛೇದಃ
ಹದಿನೈದನೆಯ ಪರಿಚ್ಛೇದವು
(71 ಶ್ಲೋಕಗಳು)
ಭಕ್ತಸ್ಥಲಾಂತರ್ಗತನವವಿಧಲಿಂಗಸ್ಥಲಪ್ರಸಂಗಃ
ಭಕ್ತಸ್ಥಲಾಂತರ್ಗತವಾದ ನವವಿಧ ಲಿಂಗಸ್ಥಲ ಪ್ರಸಂಗವು

ಅಥ ಭಕ್ತಸ್ಥಲಮ್  
ಈಗ ಭಕ್ತಸ್ಥಲವು
(6 ಶ್ಲೋಕಗಳು)

|| ಶ್ರೀ ರೇಣುಕ ಉವಾಚ ||
ಷಟ್ಸ್ಥಲೋಕ್ತಸದಾಚಾರ-
ಸಂಪನ್ನಸ್ಯ ಯಥಾಕ್ರಮಮ್ |                ಲಿಂಗಸ್ಥಲಾನಿ ಕಥ್ಯಂತೇ                    ಜೀವನ್ಮುಕ್ತಿಪರಾಣಿ ಚ ||    15-1
ಹೇ ಅಗಸ್ತ್ಯನೇ, ಅಂಗ ಷಟ್ಸ್ಥಲದಲ್ಲಿ ಹೇಳಿದ ಸದಾಚಾರ ಸಂಪನ್ನನಾದವನಿಗೆ 'ಜೀವನ್ಮುಕ್ತಿ' ಪರವಾಗಿ ಹೇಳುವ ಲಿಂಗಸ್ಥಲಗಳು ಕ್ರಮಾನುಸಾರವಾಗಿ ಹೇಳಲ್ಪಡುತ್ತವೆ.
|| ಅಗಸ್ತ್ಯ ಉವಾಚ ||
ಭಕ್ತಾದ್ಯೆ ಕ್ಯಾವಸಾನಾನಿ
ಷಡುಕ್ತಾನಿ ಸ್ಥಲಾನಿ ಚ |
ಲಿಂಗಸ್ಥಲಾನಿ ಕಾನೀಹ
ಕಥ್ಯಂತೇ ಕತಿ ವಾ ಪುನಃ ||    15-2
ಹೇ ರೇಣುಕಗಣಾಧೀಶ್ವರನೇ, ಭಕ್ತನನ್ನೇ ಮೊದಲುಗೊಂಡು ಐಕ್ಯನೇ ಕೊನೆಯದಾಗಿರುವ ಆರು ಸ್ಥಲಗಳನ್ನು ನೀವು ಹೇಳಿದ್ದೀರಿ. ಈಗ ಲಿಂಗಸ್ಥಲಗಳೆಂದರೆ ಯಾವುವು? ಅವು ಪುನಃ ಎಷ್ಟು ವಿಧವಾಗಿ

Read more...