Shri Siddhantha Shikhamani.com

Veerashaiva Dharma Grantha

ಷೋಡಶಃ ಪರಿಚ್ಛೇದಃ - Chater 16

 

 

 

ಷೋಡಶಃ ಪರಿಚ್ಛೇದಃ
ಹದಿನಾರನೆಯ ಪರಿಚ್ಛೇದವು
(84 ಶ್ಲೋಕಗಳು)

ಮಾಹೇಶ್ವರಸ್ಥಲಾಂತರ್ಗತ ನವವಿಧಲಿಂಗಸ್ಥಲಪ್ರಸಂಗಃ
ಮಾಹೇಶ್ವರಸ್ಥಲಾಂತರ್ಗತವಾದ ನವವಿಧ ಲಿಂಗಸ್ಥಲಗಳ ಪ್ರಸಂಗವು

ಅಥ ಮಾಹೇಶ್ವರಸ್ಥಲಮ್
ಈಗ ಮಾಹೇಶ್ವರಸ್ಥಲವು
(4 ಶ್ಲೋಕಗಳು)

|| ಅಗಸ್ತ್ಯ ಉವಾಚ ||
    ಸ್ಥಲಾನಾಂ ನವಕಂ ಪ್ರೋಕ್ತಮ್
    ಭಕ್ತಸ್ಥಲಸಮಾಶ್ರಯಮ್|
    ಮಾಹೇಶ್ವರಸ್ಥಲೇ ಸಿದ್ಧಮ್
    ಸ್ಥಲಭೇದಂ ವದಸ್ವ ಮೇ||    16-1
    ಭಕ್ಥಸ್ಥಲವನ್ನಾಶ್ರಯಿಸಿರ್ದ ಒಂಭತ್ತು ಸ್ಥಲಗಳು (ಲಿಂಗ ಸ್ಥಲಗಳು) ನಿನ್ನಿಂದ ಹೇಳಲ್ಪಟ್ಟವು. ಇನ್ನು ಮಾಹೇಶ್ವರಸ್ಥಲದಲ್ಲಿರುವ ಸ್ಥಲಭೇದವನ್ನು ನನಗೆ ಹೇಳುವಂಥವನಾಗು.

|| ಶ್ರೀ ರೇಣುಕ ಉವಾಚ ||
    ಮಾಹೇಶ್ವರಸ್ಥಲೇ ಸಂತಿ
    ಸ್ಥಲಾನಿ ನವ ತಾಪಸ |
    ಕ್ರಿಯಾಗಮಸ್ಥಲಂ ಪೂರ್ವಮ್
    ತತೋ ಭಾವಾಗಮಸ್ಥಲಮ್ ||    16-2
    ಜ್ಞಾನಾಗಮಸ್ಥಲಂ ಚಾಥ
    ಸಕಾಯಸ್ಥಲಮೀರಿತಮ್ |
    ತತೋಕಾಯಸ್ಥಲಂ ಪ್ರೋಕ್ತಮ್
    ಪರಕಾಯಸ್ಥಲಂ ತತಃ ||    16-3

Read more...