Shri Siddhantha Shikhamani.com

Veerashaiva Dharma Grantha

ಸಪ್ತದಶಃ ಪರಿಚ್ಛೇದಃ - Chapter 17

 

 

 

ಸಪ್ತದಶಃ ಪರಿಚ್ಛೇದಃ
ಹದಿನೇಳನೆಯ ಪರಿಚ್ಛೇದವು
(86 ಶ್ಲೋಕಗಳು)

ಪ್ರಸಾದಿಸ್ಥಲಾಂತರ್ಗತನವವಿಧಲಿಂಗಸ್ಥಲಪ್ರಸಂಗಃ
ಪ್ರಸಾದಿಸ್ಥಲಾಂತರ್ಗತವಾದ ನವವಿಧಲಿಂಗಸ್ಥಲ ಪ್ರಸಂಗವು

ಅಥ ಪ್ರಸಾದಿಸ್ಥಲಮ್
ಈಗ ಪ್ರಸಾದಿಸ್ಥಲವು
(4 ಶ್ಲೋಕಗಳು)

|| ಅಗಸ್ತ್ಯ ಉವಾಚ ||
ಸ್ಥಲಾನಿ ತಾನಿ ಚೋಕ್ತಾನಿ
ಯಾನಿ ಮಾಹೇಶ್ವರಸ್ಥಲೇ |
ವದಸ್ವ ಸ್ಥಲಭೇದಂ ಮೇ
ಪ್ರಸಾದಿಸ್ಥಲಸಂಶ್ರಿತಮ್ ||    17-1

ಹೇ ರೇಣುಕ ಗಣೇಶ್ವರನೇ, ಮಾಹೇಶ್ವರಸ್ಥಲದಲ್ಲಿ ಯಾವ ಯಾವ ಸ್ಥಲ ಭೇದಗಳಿರುವವೋ ಅವುಗಳು ನಿಮ್ಮಿಂದ ಹೇಳಲ್ಪಟ್ಟವು. ಇನ್ನು ಪ್ರಸಾದಿಸ್ಥಲವನ್ನು ಆಶ್ರಯಿಸಿದ ಸ್ಥಲಭೇದಗಳನ್ನು ಎನಗೆ ಹೇಳುವಂತಹವನಾಗು.

|| ಶ್ರೀ ರೇಣುಕ ಉವಾಚ ||
ಸ್ಥಲಭೇದಾ ನವ ಪ್ರೋಕ್ತಾಃ
ಪ್ರಸಾದಿಸ್ಥಲಸಂಶ್ರಿತಾಃ |
ಕಾಯಾನುಗ್ರಹಣಂ ಪೂರ್ವಮ್
ಇಂದ್ರಿಯಾನುಗ್ರಹಂ ತತಃ ||    17-2

ಪ್ರಾಣಾನುಗ್ರಹಣಂ ಪಶ್ಚಾತ್
ತತಃ ಕಾಯಾಪರ್ಿತಂ ಮತಮ್|
ಕರಣಾಪರ್ಿತಮಾಖ್ಯಾತಮ್
ತತೋ ಭಾವಾಪರ್ಿತಂ ಮತಮ್ ||    17-3

Read more...