Shri Siddhantha Shikhamani.com

Veerashaiva Dharma Grantha

ಏಕವಿಂಶಃ ಪರಿಚ್ಛೇದಃ Chapter 21

 

 

 

ಏಕವಿಂಶಃ ಪರಿಚ್ಛೇದಃ
ಇಪ್ಪತ್ತೊಂದನೆಯ ಪರಿಚ್ಛೇದವು
(55 ಶ್ಲೋಕಗಳು)

ವಿಭೀಷಣಾಭೀಷ್ಟಪ್ರದಾನಮ್
ವಿಭೀಷಣಾಭೀಷ್ಟ ಪ್ರದಾನವು
(55 ಶ್ಲೋಕಗಳು)

ಇತ್ಯುಕ್ತ್ವಾ ಪಶ್ಯತಸ್ತಸ್ಯ
ಪುರಸ್ತಾದೇವ ರೇಣುಕಃ |
ಅಂತರ್ದಧೇ ಮಹಾದೇವಮ್
ಚಿಂತಯನ್ನಂತರಾತ್ಮನಾ ||    21-1

ಈ ರೀತಿಯಾಗಿ ಅಗಸ್ತ್ಯನಿಗೆ ಉಪದೇಶ ಮಾಡಿದ ಶ್ರೀರೇಣುಕನು ಮಹಾದೇವನನ್ನು ತನ್ನ ಮನಸ್ಸಿನಿಂದ ಚಿಂತಿಸುತ್ತಾ ಅವನು ನೋಡುತ್ತಿರುವಾಗಲೇ ಎಲ್ಲರ ಎದುರಿಗೆ ಅಂತಧರ್ಾನನಾದನು.

ಅಂತಹರ್ಿತೇ ತದಾ ತಸ್ಮಿನ್
ಮುನಿರಾಶ್ಚರ್ಯಸಂಕುಲಃ |
ತಚ್ಛಾಸ್ತ್ರಪ್ರವಣೋ ಭೂತ್ವಾ
ಸಮವರ್ತತ ಸಂಯಮೀ ||    21-2

ಹೀಗೆ ಶ್ರೀ ರೇಣುಕ ಗಣೇಶ್ವರನು ಅಂತಧರ್ಾನಗೊಳ್ಳಲು ಸಂಯಮಿಯಾದ ಅಗಸ್ತ್ಯಮುನಿಯು ಆಶ್ಚರ್ಯಗೊಂಡ ಬಳಿಕ ಗಣೇಶ್ವರನಿಂದ ಉದ್ದಿಷ್ಟವಾದ (ಉಪದೇಶಿಸಲ್ಪಟ್ಟು) ಶಾಸ್ತ್ರದ ಅನುಷ್ಠಾನದಲ್ಲಿ ಆಸಕ್ತಿಯುಳ್ಳವನಾದನು.
ಯ ಇದಂ ಶಿವಸಿದ್ಧಾಂತಮ್
ವೀರಶೈವಮತಂ ಪರಮ್ |
ಶ್ರುಣೋತಿ ಶುದ್ಧಮನಸಾ
ಸ ಯಾತಿ ಪರಮಾಂ ಗತಿಮ್ ||      21-3

Read more...