Shri Siddhantha Shikhamani.com

Veerashaiva Dharma Grantha

ಪಂಚಮಃ ಪರಿಚ್ಛೇದಃ - Chapter 5

ಪಂಚಮಃ ಪರಿಚ್ಛೇದಃ
ಐದನೆಯ ಪರಿಚ್ಛೇದವು


ಭಕ್ತಸ್ಥಲೇ ಪಿಂಡ-ಪಿಂಡಜ್ಞಾನ-ಸಂಸಾರಹೇಯಸ್ಥಲಪ್ರಸಂಗಃ
ಭಕ್ತಸ್ಥಲದ ಪಿಂಡ, ಪಿಂಡಜ್ಞಾನ, ಸಂಸಾರಹೇಯಸ್ಥಲ ಪ್ರಸಂಗವು
(77 ಶ್ಲೋಕಗಳು)

ಸಿದ್ಧಾಂತಕಥನಮ್
ಸಿದ್ಧಾಂತದ ಕಥನವು
(21 ಶ್ಲೋಕಗಳು)

ಅಥಾಗಸ್ತ್ಯವಚಃ ಶ್ರುತ್ವಾ
ರೇಣುಕೋ ಗಣನಾಯಕಃ |
ಧ್ಯಾತ್ವಾ ಕ್ಷಣಂ ಮಹಾದೇವಮ್
ಸಾಂಬಮಾಹ ಸಮಾಹಿತಃ ||     5-1
ಬಳಿಕ ಅಗಸ್ತ್ಯರ ಬಿನ್ನಪವನ್ನು ಕೇಳಿ ಗಣನಾಯಕರಾದ ರೇಣುಕರು ಕ್ಷಣಕಾಲ ಸಾಂಬ(ಉಮಾಪತಿ)ನಾದ ಮಹಾದೇವನನ್ನು ಧ್ಯಾನ ಮಾಡಿ ಸಮಾಧಾನ ಚಿತ್ತದಿಂದ ನುಡಿದರು.

ಅಥ ಶ್ರೀರೇಣುಕಶಾಸನಂ       ಶ್ರೀರೇಣುಕ ಶಾಸನದ ಪ್ರಾರಂಭವು

ಅಗಸ್ತ್ಯ ಮುನಿಶಾದರ್ೂಲ
ಸಮಸ್ತಾಗಮಪಾರಗ |
ಶಿವಜ್ಞಾನಕರಂ ವಕ್ಷ್ಯೇ
ಸಿದ್ಧಾಂತಂ ಶ್ರುಣು ಸಾದರಮ್ ||

Read more...