Shri Siddhantha Shikhamani.com

Veerashaiva Dharma Grantha

Prastavane & Parayana Vidhi

ಶ್ರೀಮದ್ ಕಾಶೀ ಜ್ಞಾನಸಿಂಹಾಸನಾಧೀಶ್ವರ
ಶ್ರೀ 1008 ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ
ಮಹಾಸ್ವಾಮಿಗಳು
ಜಂಗಮವಾಡಿಮಠ, ವಾರಾಣಸಿ
ಪ್ರಸ್ತಾವನೆ


ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಬಗೆಗೆ :

ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥವು ಶೈವಭಾರತೀ ಶೋಧ ಪ್ರತಿಷ್ಠಾನದ 56ನೆಯ ಕುಸುಮವಾಗಿ ಪ್ರಕಟವಾಗುತ್ತಿರುವುದು ನಮಗೆ ಸಂತೋಷವನ್ನು ತಂದಿದೆ. ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಅಂಗಸಂಸ್ಥೆಯಾದ ಶೈವಭಾರತೀ ಶೋಧ ಪ್ರತಿಷ್ಠಾನವು 20.8.1993 ರಂದು ಪ್ರತಿಷ್ಠಾಪನೆಗೊಂಡಿರುತ್ತದೆ. ಇದು ನವದೆಹಲಿಯ ರಾಷ್ಟ್ರೀಯ ಸಂಸ್ಕ ೃತ ಸಂಸ್ಥಾನದಿಂದ ಮಾನ್ಯತೆಯನ್ನು ಪಡೆದುಕೊಂಡ ಸಂಸ್ಥೆಯಾಗಿದೆ. ಆಗಮಶಾಸ್ತ್ರದ ಮೂರ್ಧನ್ಯ ವಿದ್ವಾಂಸರಾದ ಪಂ. ವ್ರಜವಲ್ಲಭ ದ್ವಿವೇದಿಯವರು ಈ ಶೋಧ ಪ್ರತಿಷ್ಠಾನದ ನಿದರ್ೆಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂ. ಸುಧಾಂಶು ಶೇಖರ ಶಾಸ್ತ್ರಿ, ಪಂ. ಶೀತಲಪ್ರಸಾದ ಉಪಾಧ್ಯಾಯ, ಡಾ. ರಮಾ ಘೋಷ್ ಹಾಗೂ ಡಾ. ಕುಟುಂಬ ಶಾಸ್ತ್ರಿಗಳು ಪರಾಮರ್ಶದಾತೃ ಸಮಿತಿಯ ಸನ್ಮಾನಿತ ಸದಸ್ಯರಾಗಿರುತ್ತಾರೆ

Read more...